Sunday, 2 October 2011

ಹಾಯ್ಕುಗಳ ಕೊಲೆ


ನಗು
ಒಮ್ಮೆ ಸುಮ್ಮನೆ ನಗು
ಹೂ ಅರಳದಿದ್ರೂ, ಒಂದು ಸ್ವಸ್ಥ ಬಿಸಿಲಂತೂ ಖಾತರಿ.

ಸೋಡಿಯಂ ಲೈಟು
ಹಿತವಾದ ಸಂಜೆಗತ್ತಲು, ಅಲ್ಲಲ್ಲೇ ಚೆಲ್ಲಿದ ಸೋಡಿಯಂ ಲೈಟು
ಲವ್ ಮೇಕಿಂಗ್ ಗೆ, ಈಡೆನ್ ಗಾರ್ಡನ್ ಬೇಕಿಲ್ಲ

ಗುಬ್ಬಿಮರಿ
ಮೊನ್ನೆ ದೊಡ್ಡ ಮಳೆಗೆ ಮಾಡು ಕುಸಿದುಬಿತ್ತು
ಹೊಸ್ತಿಲ ಮೇಲೆಲ್ಲ ಗುಬ್ಬಿಮರಿಗಳ ಛಿದ್ರ ದೇಹಗಳು

ನನ್ನಜ್ಜಿ
ನೀನು ದೊಡ್ಡಗಾತ್ರದ ಚಿಕ್ಕ ಮಗು
ನೆರೆತ ಮಂಡೆ, ಸುಕ್ಕು ಚರ್ಮ, ಗಟ್ಟಿ ನಗೆಯ ಸುಹಾಸಿನಿ

ಕನಸು
ಕನಸುಗಳಿಗೆ ಮಾತು ಬಂದು, ಸುಮ್ಮನೇ ಕೂಗಿಕೊಳ್ಳುತ್ತವೆ.
"ನೀನು ಬೇಕೂ" ಎಂದು

1 comment: