ಸೀತೆ ಕದ್ದಿದ್ದು ನಿಜ, ಆದರೆ ಅವಳನ್ನು ಚೆನ್ನಾಗಿಟ್ಟೆ
ಕೈಹಿಡಿದ ರಾಮನಂತೆ ಬೆಂಕಿ ಪಾಲು ಮಾಡಲಿಲ್ಲ.
ಸೋತು ಸತ್ತದ್ದು ನಿಜ. ಪಡೆದದ್ದು ವೀರ ಮರಣ
ಕ್ಷತ್ರಿಯ ರಾಮನಂತೆ ನೀರುಪಾಲಾಗಲಿಲ್ಲ
ಗಂಡನ ಸಂಶಯಕ್ಕೆ, ಪಾವಿತ್ರ್ಯದ ಹೆಸರೇಕೋ?
ಆತ್ಮಹತ್ಯೆಗೇಕೆ ದೈವಿಕತೆಯ ಸೋಗು?.
ರಾವಣ
ನೂರು ತಲೆ ನನ್ನವು
ನನ್ನವು ಸಾವಿರ ಹೆಸರುಗಳು
ನಾನು ಬೆಂಕಿಯುಸಿರ ರಾಕ್ಷಸ
ರಕ್ತದಾಹೀ ನನ್ನ ಚಕ್ಷುಗಳು
ನೂರು ತಲೆಯ ಭಾರ ನಿಮಗೇನು ಗೊತ್ತು?
ಸಹಸ್ರ ಹೆಸರುಗಳು ನೆನಪಿನಲ್ಲುಳಿಯವು
ಉಸಿರು ತುಂಬಿದ ಎದೆಗೂಡು ದಹಿಸುತ್ತಿದೆ
ಎಲ್ಲೆಲ್ಲೂ ರಕ್ತ ನೋಡಿ ವಾಕರಿಕೆ.
No comments:
Post a Comment