ದೂರದಲ್ಲೊಂದು ಊರು, ಆ ಊರ ತುಂಬ ಜನ.
ಜನ ಎಂದರೆ ಹಾಗಲ್ಲ! ಅಲ್ಲಿರುವುದು ವಿಪರೀತ ಜನ. ಕಾಲ್ಕಲಿಗೇ ತೊಡರುವ, ಯಾವ ಹೊತ್ತಿನಲ್ಲೂ ಹ್ಯಾಂಡ್ ಪೋಸ್ಟಿನ
ತುಂಬ ಮಿಜಿ ಮಿಜಿ ಜನ. ಅ ಊರ ಜನ, ಪಕ್ಕದೂರ ಜನ, ಬೆಂಗ್ಳೂರ ಜನ, ಅಲ್ಲೇ ಇದ್ದೋರು, ಎಲ್ಲಿಂದಲೋ ಬಂದವರು, ಮತ್ತೆಲ್ಲೋ ಹೋಗೋ ಜನ. ಊರೆಂದಮೇಲೆ ಅದಕ್ಕೊಂದು ಬಸ್ಟ್ಯಾಂಡು, ಅದರ ತುಂಬ ಮತ್ತದೇ ಜನ.
ಮಳೆಗಾಲ ನೋಡಿ! ಸ್ಟ್ಯಾಂಡೆಂಬ ಸ್ಟ್ಯಾಂಡು ಜನರದೊಂದು ನಿರಾಶ್ರಿತರ ತಾಣದಂತಾಗಿ ಹೋಗಿತ್ತು. ನಾಲ್ಕು ಬಸ್ಸು, ಅದರ ಸುತ್ತ ನಾನ್ನೂರು ಜನ. ಎಲ್ಲಾ ತರದ ಜನ, ಕೊಳಕು ಜನ, ಊರ ಜನ, ಹಳ್ಳಿ ಜನ. ಒಟ್ಟಿನಲ್ಲಿ ಜನ. ವರ್ಷದ ಹತ್ತು ತಿಂಗಳೂ ಮಳೆಸುರಿಯುವ ಮಲೆನಾಡಿನ ತಾಲ್ಲೂಕು ಕೇಂದ್ರವೊಂದಕ್ಕೆ ಎರಡು ಮೈಲು ಹತ್ತಿರ ಹಾಗು ಜನರೆಲ್ಲ ಹೋಗಿ ತಮ್ಮ ಮುಡಿ ಕೊಟ್ಟು ಬರುವ ಧರ್ಮಸ್ಥಳದಿಂದ ನೂರು ಮೈಲು ದೂರ. ಮೂರೇ ಕೇರಿಗಳಿರುವ, ಹೆಸರಿಗೊಂದು ಬಸ್ ಸ್ಟ್ಯಾಂಡಿರುವ ವಿಲಕ್ಷಣ ಊರು. ಬರುವ ಎಲ್ಲಾ ಎಕ್ಸ್ಪ್ರೆಸ್ ಬಸ್ಸುಗಳಿಗೆ ಇಲ್ಲೊಂದು ಸ್ಟಾಪು ಮತ್ತು ಧರ್ಮಸ್ಥಳ-ಮಂಗ್ಳೂರು-ರಸ್ತೆಗಳಿಗಿಲ್ಲೊಂದು ಡೀವಿಯೇಶನ್ ಇವೆರೆಡೇ ಕಾರಣಗಳಿಂದ ಇದೊಂದು ಊರು ಮತ್ತು ಊರತುಂಬ ಜನ, ವಿಪರೀತ ಜನ.
ಬಸ್ಸು ಕಾಯುವ ಜನ, ಬಸ್ಸು ಕಾಯದ, ಅಸಲಿಗೆ ಏನೂ ಮಾಡದ ಜನ, ಕಡಲೇಕಾಯಿ ಮಾರುವ ಜನ, ಬಸ್ಟ್ಯಾಂಡಿನ ಬಚ್ಚಲು ತೊಳೆಯುವ ಜನ, ತೋಟಗಳಿಗೆ ಕೂಲಿಗೆ ಬಂದ ತುಳು ಜನ, ಗಾರೆ ಕೆಲಸದ ತಮಿಳು ಜನ, ಇಲ್ಲೇ ವರ್ಷಗಳಿಂದ ಕಾಫೀ ನರ್ಸರಿ ಮಾಡಿಕೊಂಡಿರೊ ಮಲಯಾಳಿ ಜನ, ಎಲೆ ಅಡಿಕೆ ಕಲೆಗಳಿರೋ ಕೆಂಪುಹಲ್ಲಿನ ಜನ, ಮರ ಕಡಿದು, ಕಳ್ಳು ಕಾಯಿಸಿ, ಸಿಕ್ಕವರ ತಲೆ ಹಿಡಿದು ಬದುಕುತ್ತಿರುವ ಜನ, ಮಕ್ಕಳನ್ನು ಬಸ್ಸು ಹತ್ತಿಸಲು ಬಂದ ಜನ, ಎಲ್ಲರಿಂದ ದೂರವಿರುತ್ತಾ, ತಮ್ಮದೇ ಲೋಕ ಸೃಷ್ಟಿಸಿಕೊಂಡು ಬದುಕುವ ತುರ್ಕ ಜನ, ಯಾರೋ ಕೂಲಿಯವನ ಸಾಲದ ಬದಲು, ಅವನ ಹೆಂಡಿರನ್ನೋ, ಹೆಣ್ಣು ಮಕ್ಕಳನ್ನೋ ಹುರಿದು ಮುಕ್ಕಿ ಮರಳಿ ಹೊರಟ ದೊಡ್ಡ ಜನ, ಯಾವಳೋ ತಲೆ ಮಾಸಿದ ನಲವತ್ತರ ಸೂಳೆಯ ಬಳಿ ಮಸಾಜು ಮಾಡಿಸಿಕೊಳ್ಳಲು ಬಂದ ಬೇರೆ ಊರ ಸಿರಿವಂತ ಜನ, ಮಾಡಲು ಕೆಲಸವಿಲ್ಲದ, ಅರ್ಧ ಓದಿ ಅರ್ಧ ಬರೆದು ಊರಲ್ಲಿಯೆ ಉಳಿದು ಹೊಟೇಲು, ಟೈಲರಿಕೆ, ಇಸ್ತ್ರಿ ಮಾಡಿಕೊಂಡಿರುವ ಸೀದಾ ಸಾದಾ ಜನ.
ಬಸ್ಟ್ಯಾಂಡಿಗೊಂದು ಮೆರಗು ತಂದು ಕೊಡುವುದೇ ಈ ತರಹೇವಾರಿ ಜನ. ಎಲ್ಲೋ ಗದಗ, ಮುಂಡರಗಿಯಿಂದ ಮಂಜುನಾಥನಿಗೆ ಮುಡಿಕೊಡಲು ಹೊರಟಿರುವ ಬಸ್ಸಿನಿಂದಿಣುಕುವ ಒರಟು ಮುಖದ ಜನ, ಘಾಟಿ ಹತ್ತುವಾಗ ವಾಂತಿ ಮಾಡಿ ಸುಸ್ತಾಗಿ ಬಸ್ಸಿಳಿದು ನಿಂತ ಜನ, ಬಸ್ಸು ಕಾಯುವಂತೆ ನಟಿಸುತ್ತ, ಪದೇ ಪದೇ ಜೆಂಟ್ಸ್ ಟಾಯ್ಲೆಟ್ಟಿಗೆ ಹೋಗುವವರಲ್ಲಿ "ತಮ್ಮಂಥವರಿದ್ದಾರಾ" ಎಂದು ಹಣಕುವ ಹೋಮೋಸೆಕ್ಸು ಜನ ಮತ್ತು ಅಂಥವರಿದ್ದರೆ ಅವರನ್ನು ಹಿಗ್ಗಾ ಮುಗ್ಗಾ ಹೊಡೆದು ಹಾಕುವ ಪೋಲೀಸು ಜನ.
ಇಳಿ ಮಧ್ಯಾಹ್ನದವರೆಗೂ ಇರುವ ಜನ ಸಂಜೆಯಗುತ್ತಲೇ ಕರಗಲಾರಂಭಿಸುತ್ತಾರೆ. ಕಡಲೇಕಾಯಿಯವ ದುಡಿದ ಚಿಲ್ಲರೆ ಎಣಿಸುತ್ತಾ ಮನೆಗೋಡುತ್ತಾನೆ, ಕೂಲಿಜನ ಬಸ್ಸೇರಿ ಊರುಸೇರುತ್ತಾರೆ, ಇಸ್ತ್ರಿ, ಹೊಟೇಲು, ಟೇಲರಿಕೆಯ ಮಂದಿ ಎಳು ಗಂಟೆಗಾಗಲೇ ಅಂಗಡಿ ಮುಚ್ಚುತ್ತಾರೆ, ಬಸ್ಸು ಕಾಯುವವರು ಸಿಕ್ಕ ಬಸ್ಸೇರಿ ಹೋಗುತ್ತಾರೆ, ಎಲ್ಲೋ ಒಂದೆರೆಡು ಗೂಡಂಗಡಿಗಳೊಳಗಿನಿಂದ ಮಾಸಿದ ಮುಖದ ಜನ ಇಣುಕುತ್ತಾರೆ. ಅಗೊಮ್ಮೆ ಈಗೊಮ್ಮೆ ಬರುವ
ಬಸ್ಸು ಜನರನ್ನಿಳಿಸುವುದಿಲ್ಲ, ಅದೊರಳಗಿನಿಂದ ಜನ ಹೊರಗಿಣುಕುವುದೂ ಇಲ್ಲ. ಹೀಗಾಗಿ ಎಲ್ಲಿ ಹೋದರು ಪಿತಿ ಪಿತಿ ಜನ ಎಂಬಂತಾಗುತ್ತದೆ. ಒಟ್ಟಿನಲ್ಲಿ ಗಲ್ಲಿಗಳಲ್ಲಿ ಸ್ಮಶಾನ ಮೌನ!, ಅರ್ಧ ಕೆಟ್ಟ ತೂಬಿನ ಲೈಟು ಆಗೊಮ್ಮೆ ಈಗೊಮ್ಮೆ ಮಿಣುಕಿ ಮಾಯವಾಗುತ್ತದೆ. ಜನರಿದ್ದಲ್ಲೀಗ ಕತ್ತಲು ಮತ್ತು ಒಂದೇ ಸಮನೆ ಎಂದಿಗೂ ಮುಗಿಯಲೊಲ್ಲದ ಮಳೆ, ಮಳೆ, ಮಳೆ.
ಮನೆ ಮಠವಿರದೆ ಬಸ್ಟ್ಯಾಂಡಿನ ಮೂಲೆಯೊಂದರಲ್ಲಿ ನಡುಗುತ್ತಾ ಕುಳಿತ ಮುದುಕಿಗೆ ಈ ಮಳೆ ಹಸಿವಿನೊಂದಿಗೆ ಸಣ್ಣ ಜ್ವರವನ್ನೂ ತಂದು ಕೊಡುತ್ತದೆ. ಆ ಛಳಿಯಲ್ಲಿ ಅದು ತಂದೊಡ್ಡುವ ಅನಾಥ ಭಾವದಲ್ಲಿ ಅವಳಲ್ಲಿದ್ದ ಒಂದು ತುಂಡು ಬ್ರೆಡ್ದು, ತುತ್ತನ್ನ ಸಿಕ್ಕೀತೆಂಬ ಅಸೆಯೂ ಸತ್ತುಹೋಗುತ್ತದೆ. ಅವಳಿಗೆ ಈ ಕತ್ತಲೆಂಬುದು , ಮಳೆಯೆಂಬುದು ತನ್ನ ಯೌವನದ ನೆನಪು ತರದೇ ಇಂತಹುದೇ ಕತ್ತಲೆಯ ರಾತ್ರಿ ಕಾಫಿಯ ಧಣಿಯೊಬ್ಬ ಅವಳಿಂದ ಕಸಿದುಕೊಂಡ ಅವಳ ಬದುಕು ಮತ್ತದರ ದುರಂತ ನೆನಪಾಗುತ್ತದೆ. ಇಂಥದೇ ಮಳೆಯಲ್ಲಿ ಸೇತುವೆ ದಾಟುವಾಗ ಕೊಚ್ಚಿಹೋದ ಮಗ ನೆನಪಾಗುತ್ತಾನೆ. ಮಳೆಯಿಂದ ಕೆಳಬಿದ್ದಿದ್ದ ಎಲೆಕ್ಟ್ರಿಕ್ ತಾರು ತಿಳಿದು ಕರಕಲಾಗಿ ಹೋದ ಗಂಡ ನೆನಪಾಗುತ್ತಾನೆ. ಅವನ್ಯಾವನೋ ಬೇರಿಯೊಂದಿಗೆ ಮುಂಬಯಿಗೆ ಕೆಲಸಕ್ಕೆಂದು ಓಡಿಹೋಗಿ ಅಲ್ಲೇ ಸೂಳೆಯಾಗಿರುವ ಮಗಳು, ಅದ್ಯಾವತ್ತೋ ಮಳೆಗೆ ಬಿದ್ದು ಹೋದ ಮನೆ ಮತ್ತದರೊಳಗೆ ಮಗಳು ಹಚ್ಚುತ್ತಿದ್ದ ದೀಪದ ಬೆಳಕು ನೆನಪಾಗಿ ಕಾಡುತ್ತದೆ. ಕೊನೆಗೆ ಛಳಿಯೆಂಬುದು ಅವಳ ಜೀವ ತೆಗೆದಿರುತ್ತದೆ. ರಾತ್ರಿ ಕಳೆದು ಹಗಲಾಗುವುದರೊಳಗೆ ಅವಳು ಅನಾಥ ಹೆಣವೆಂದು ನಮೂದಿಸಲ್ಪಡುತ್ತಾಳೆ.
ಜನವೆಲ್ಲ ಹೆಣ ನೋಡಿ ನಿಟ್ಟುಸಿರಾಗುತ್ತದೆ ಮತ್ತು ಮರೆತು ಮುಂದುವರೆಯುತ್ತದೆ. ಮತ್ತದೇ ಊರು. ಬೋಗಾದಿಯೆಂಬುದೊಂದು ಊರು, ಆ ಊರ ತುಂಬ ಜನ. ಜನ, ಜನ, ಜನ ಎಂದರೆ ಹಾಗಲ್ಲ ವಿಪರೀತ ಜನ. ಕಾಲ್ಕಲಿಗೇ ತೊಡರುವ ಮಿಜಿ ಮಿಜಿ ಜನ.

No comments:
Post a Comment