Friday, 7 December 2012

ಕನವರಿಕೆಗಳು



ಅವೇಳೆ ಮಳೆ

ಮುಗಿಲಿಂದು ಮಲೆನಾಡ ಕರಿಬಸುರಿ
ದೊಡ್ಡ ಕಣ್ಣಿನ,ಚೆಂದ ನಗುವಿನ, ಕಪ್ಪು ಬಣ್ಣದ ಮಳೆಯ ತಾಯಿ

ಹಿಂಗಾರ ನೆನೆಪು

ನಿನ್ನ ನೆನಪು ಹಿಂಗಾರ ಉದುರು ಮಳೆ
ಜೋರಾಗಿ ಸುರಿಯದೆ, ನಿಂತೂ ನಿಲ್ಲದೆ, ಕಾಡಿಸಿ ಕೊಲ್ಲುತ್ತದೆ

ಹಂಬಲ

ಸಿಹಿನೀರ ತಿಳಿಗೊಳಕೆ ಕಲ್ಲು ಬಿದ್ದು
ಮೇಲೆದ್ದ ಕೆಸರಿಗೂ ಮುಂದೆ ಕಮಲದ ತಾಯಾಗುವ ಹಂಬಲ

ಬಿಸಿಲ ಕೋಲು

ಸ್ಪಷ್ಟ ಬಿಸಿಲಿನ ಮುದ್ದು ಬೆಳಗು, ಕಿಟಕಿ ಪಕ್ಕದ ಮಲ್ಲಿಗೆ ಬಳ್ಳಿ
ನಡುನಡುವೆ ನಿನ್ನ ನೆನಪು, ಮನೆಯ ಒಳಗಡೆ ಬಿಸಿಲ ಕೋಲುಗಳು

ನಿನ್ನ ಕಣ್ಣುಗಳು

ನಿನ್ನ ಕಣ್ಣು ಗಳೆಷ್ಟು ಚೆನ್ನ, ನಕ್ಕಾಗ ಮುದ್ದಾಗಿ ಹೊಳೆಯುತ್ತವೆ
ತುಳಸಿ ಕಟ್ಟೆಯೆದುರು, ಸಂಜೆ ಹಚ್ಚಿಟ್ಟ ನಂದಾದೀಪ

ಅಡವಿ

ನೀನು ದಟ್ಟಡವಿಯ ಮುಂಜಾವಿನಂಥವನು
ಬಿಸಿಲಿಗೆ ಕರಗಿ, ಎಲೆಗಳ ಮೇಲೆಲ್ಲಾ ಹರಡಿಕೊಳ್ಳುತ್ತೀ.
(ಅಡವಿ- ಮೆಹಜಬೀನ್ ಎಂಬ ತೆಲುಗು ಕವಿಯಿತ್ರಿಯೊಬ್ಬರ ಕವಿತೆಯಿಂದ ಪ್ರಭಾವಿತ)

ಅನುವಾದಿತ



ಕಥೆ ಗೀಚುತ್ತಾ, ಬಣ್ಣ ಹಚ್ಚುತ್ತಾ,
ಗೆಳೆಯರೊಂದಿಗೆ ಅಲೆದುಕೊಂಡಿದ್ದೆ
ನೀ ಸಿಕ್ಕೆ ನೋಡು,
ನಿನ್ನಲ್ಲೇ ತೃಪ್ತಿಯಿಂದ ಬಿದ್ದುಕೊಂಡ,
ನಾಯಾಗಿ ಹೋದೆ ನಾನು
 - ಕಮಲಾ ಸುರೈಯ್ಯಾ

Those were the days


Those were the days
We often met,
And cheeks lit up,
A sexy pink

A cup of wine


Clouds dissolve,
Into a sunny reprise,
A cup of wine,
The sky becomes..

The Koel's Song


The koel starts,
A haunting tune
That meanders the palm grooves,
A full warm day

Here you come...


Winter evenings
Wake up cheerful,
And spread a smile,
Here you come 

Mumble mumble


Why do often,
The palm leaves glow,
With a nuptial bliss,
On scarlet evenings
ಅಸಂಗತ

ರಸ್ತೆ ದಾಟಿ ಬಸ್ಸು ಹಿಡಿವ ಗೊಂದಲ
ನಮ್ಮವೇ ಬಿಂಬಗಳ ಮೇಲೆ ಸಣ್ಣ ಅನುಮಾನ
ಹಿಂದೆ ಯಾರೋ ಬಂದರೆಂದು ತಿರುಗಿದರೆ,
ನಮ್ಮದೇ ನೆರಳು-
ಹುಟ್ಟಿಸುವ ಚಿಕ್ಕ ಭಯ

ಮಳೆ

ಒಡೆದ ಕುಂಡ, ಮುರುಕು ಖುರ್ಚಿ
ತೂತು ಬಿದ್ದ ಕೊಡಗಳು.
ಸಣ್ಣ ಸೋನೆ ಮಳೆಗೆ ಕಾದು,
ಜಡ್ಡು ಹಿಡಿದ ಮನಗಳು.