Sunday, 2 October 2011

To Bangalore, With Love


You are an art piece! Something too beautiful, yet messed up. Where beauty and imperfection go hand in hand,darkness and light are intricately woven to make you glow and look prettier. You are eyed dark damsel and I love you!
 I have hated you lots. Yes you have been my darkest fear and ugliest nightmare. I have hated you more than anything ever and i have never hated anything as much. You had all my hatred. There was not a single thing I did not do to avoid you! I ran away, I turned my face away and cried, I literally hid under the cot and yelled “ Do not let her near me!!” I never wanted you. Oh! I was such a moron I hated you!
But then! It was you who came to me. With a warm summer grin, you came to me, you held me tight, looked at me with pity and slowly whispered into my years “Chill deary! I love you and im gonna change your life!” Oh god! It was such an eye opener! I was shaken for a moment, and then, i fell in love with you the next moment! As if it is something divine, so pure, so beautiful.
Remember the first day I was with you and it rained? Our first monsoon shower, or may be it was something you did to welcome me my love, it was beautiful! It was you n it was me and I loved it. You welcomed me into your arms and I lost myself in the embrace. So thrilling, so ecstatic!
I know1 a few still think my courtship with you was disgraceful; they feel i have messed up myself more with you being a part myself! But they do not understand. How can love be a disgrace when it is beyond all rights and wrongs? They will never quite realise you have become an inseparable part of my existence and that my being has blended so well with you. For them, you are just a city, a means of livelihood.  But for me, you are means of my being! You are my doe eyed black beauty.
But as they say all good things end soon, our togetherness ended too! In the very less time i spent with you, you have  become so much a part of me that I do not find words to explain! In spite of my failures, blunders and confusions, I loved you and will keep loving you forever. And I can never let you go!
In the moments I am away from you, I have only longed to get back to you. To run back with the haste of a baby who runs to his mother and lose myself in your eternal depth. I love you for your intensity and flow. I have always wanted you back.
Come to me oh love1 come to me with the summer grin and monsoon moist, pull me to yourself and whisper again, that you love me and want me again! Hold me tight in your arms and never ever let me go! Gulp me into your enormous heart and meke me lose myself in your beauty and grace.
I promise! I will walk hand in hand forever and will never abandon you! Its a promise, oh city that changes lives! Change me forever and get me back my. थोडी सी जमीन, थोडा आसमान


ಜನ

ದೂರದಲ್ಲೊಂದು ಊರು, ಆ ಊರ ತುಂಬ ಜನ.

ಜನ ಎಂದರೆ ಹಾಗಲ್ಲ! ಅಲ್ಲಿರುವುದು ವಿಪರೀತ ಜನ. ಕಾಲ್ಕಲಿಗೇ ತೊಡರುವ, ಯಾವ ಹೊತ್ತಿನಲ್ಲೂ ಹ್ಯಾಂಡ್ ಪೋಸ್ಟಿ
ತುಂಬ ಮಿಜಿ ಮಿಜಿ ಜನ. ಅ ಊರ ಜನ, ಪಕ್ಕದೂರ ಜನ, ಬೆಂಗ್ಳೂರ ಜನ, ಅಲ್ಲೇ ಇದ್ದೋರು, ಎಲ್ಲಿಂದಲೋ ಬಂದವರು, ಮತ್ತೆಲ್ಲೋ ಹೋಗೋ ಜನ. ಊರೆಂದಮೇಲೆ ಅದಕ್ಕೊಂದು ಬಸ್ಟ್ಯಾಂಡು, ಅದರ ತುಂಬ ಮತ್ತದೇ ಜನ.

ಮಳೆಗಾಲ ನೋಡಿ! ಸ್ಟ್ಯಾಂಡೆಂಬ ಸ್ಟ್ಯಾಂಡು ಜನರದೊಂದು ನಿರಾಶ್ರಿತರ ತಾಣದಂತಾಗಿ ಹೋಗಿತ್ತು. ನಾಲ್ಕು ಬಸ್ಸು, ಅದರ ಸುತ್ತ ನಾನ್ನೂರು ಜನ. ಎಲ್ಲಾ ತರದ ಜನ, ಕೊಳಕು ಜನ, ಊರ ಜನ, ಹಳ್ಳಿ ಜನ. ಒಟ್ಟಿನಲ್ಲಿ ಜನ. ವರ್ಷದ ಹತ್ತು ತಿಂಗಳೂ ಮಳೆಸುರಿಯುವ ಮಲೆನಾಡಿನ ತಾಲ್ಲೂಕು ಕೇಂದ್ರವೊಂದಕ್ಕೆ  ಎರಡು ಮೈಲು ಹತ್ತಿರ ಹಾಗು ಜನರೆಲ್ಲ ಹೋಗಿ ತಮ್ಮ ಮುಡಿ ಕೊಟ್ಟು ಬರುವ ಧರ್ಮಸ್ಥಳದಿಂದ ನೂರು ಮೈಲು ದೂರ. ಮೂರೇ ಕೇರಿಗಳಿರುವ, ಹೆಸರಿಗೊಂದು ಬಸ್ ಸ್ಟ್ಯಾಂಡಿರುವ ವಿಲಕ್ಷಣ ಊರು. ಬರುವ ಎಲ್ಲಾ ಎಕ್ಸ್ಪ್ರೆಸ್ ಬಸ್ಸುಗಳಿಗೆ ಇಲ್ಲೊಂದು ಸ್ಟಾಪು ಮತ್ತು ಧರ್ಮಸ್ಥಳ-ಮಂಗ್ಳೂರು-ರಸ್ತೆಗಳಿಗಿಲ್ಲೊಂದು ಡೀವಿಯೇಶನ್  ಇವೆರೆಡೇ ಕಾರಣಗಳಿಂದ ಇದೊಂದು ಊರು ಮತ್ತು ಊರತುಂಬ ಜನ, ವಿಪರೀತ ಜನ.

ಬಸ್ಸು ಕಾಯುವ ಜನ, ಬಸ್ಸು ಕಾಯದ, ಅಸಲಿಗೆ ಏನೂ ಮಾಡದ ಜನ, ಕಡಲೇಕಾಯಿ ಮಾರುವ ಜನ, ಬಸ್ಟ್ಯಾಂಡಿನ ಬಚ್ಚಲು ತೊಳೆಯುವ ಜನ, ತೋಟಗಳಿಗೆ ಕೂಲಿಗೆ ಬಂದ ತುಳು ಜನ, ಗಾರೆ ಕೆಲಸದ ತಮಿಳು ಜನ, ಇಲ್ಲೇ ವರ್ಷಗಳಿಂದ ಕಾಫೀ ನರ್ಸರಿ ಮಾಡಿಕೊಂಡಿರೊ ಮಲಯಾಳಿ ಜನ, ಎಲೆ ಅಡಿಕೆ ಕಲೆಗಳಿರೋ ಕೆಂಪುಹಲ್ಲಿನ ಜನ, ಮರ ಕಡಿದು, ಕಳ್ಳು ಕಾಯಿಸಿ, ಸಿಕ್ಕವರ ತಲೆ ಹಿಡಿದು ಬದುಕುತ್ತಿರುವ ಜನ, ಮಕ್ಕಳನ್ನು ಬಸ್ಸು ಹತ್ತಿಸಲು ಬಂದ ಜನ, ಎಲ್ಲರಿಂದ ದೂರವಿರುತ್ತಾ, ತಮ್ಮದೇ ಲೋಕ ಸೃಷ್ಟಿಸಿಕೊಂಡು ಬದುಕುವ ತುರ್ಕ ಜನ, ಯಾರೋ ಕೂಲಿಯವನ ಸಾಲದ ಬದಲು, ಅವನ ಹೆಂಡಿರನ್ನೋ, ಹೆಣ್ಣು ಮಕ್ಕಳನ್ನೋ ಹುರಿದು ಮುಕ್ಕಿ ಮರಳಿ ಹೊರಟ ದೊಡ್ಡ ಜನ, ಯಾವಳೋ ತಲೆ ಮಾಸಿದ ನಲವತ್ತರ ಸೂಳೆಯ ಬಳಿ ಮಸಾಜು ಮಾಡಿಸಿಕೊಳ್ಳಲು ಬಂದ ಬೇರೆ ಊರ ಸಿರಿವಂತ ಜನ, ಮಾಡಲು ಕೆಲಸವಿಲ್ಲದ, ಅರ್ಧ ಓದಿ ಅರ್ಧ ಬರೆದು ಊರಲ್ಲಿಯೆ ಉಳಿದು ಹೊಟೇಲು, ಟೈಲರಿಕೆ, ಇಸ್ತ್ರಿ ಮಾಡಿಕೊಂಡಿರುವ ಸೀದಾ ಸಾದಾ ಜನ.

ಬಸ್ಟ್ಯಾಂಡಿಗೊಂದು ಮೆರಗು ತಂದು ಕೊಡುವುದೇ ಈ ತರಹೇವಾರಿ ಜನ. ಎಲ್ಲೋ ಗದಗ, ಮುಂಡರಗಿಯಿಂದ ಮಂಜುನಾಥನಿಗೆ ಮುಡಿಕೊಡಲು ಹೊರಟಿರುವ ಬಸ್ಸಿನಿಂದಿಣುಕುವ ಒರಟು ಮುಖದ ಜನ, ಘಾಟಿ ಹತ್ತುವಾಗ ವಾಂತಿ ಮಾಡಿ ಸುಸ್ತಾಗಿ ಬಸ್ಸಿಳಿದು ನಿಂತ ಜನ, ಬಸ್ಸು ಕಾಯುವಂತೆ ನಟಿಸುತ್ತ, ಪದೇ ಪದೇ ಜೆಂಟ್ಸ್ ಟಾಯ್ಲೆಟ್ಟಿಗೆ ಹೋಗುವವರಲ್ಲಿ "ತಮ್ಮಂಥವರಿದ್ದಾರಾ" ಎಂದು ಹಣಕುವ ಹೋಮೋಸೆಕ್ಸು ಜನ ಮತ್ತು ಅಂಥವರಿದ್ದರೆ ಅವರನ್ನು ಹಿಗ್ಗಾ ಮುಗ್ಗಾ ಹೊಡೆದು ಹಾಕುವ ಪೋಲೀಸು ಜನ.

ಇಳಿ ಮಧ್ಯಾಹ್ನದವರೆಗೂ ಇರುವ ಜನ ಸಂಜೆಯಗುತ್ತಲೇ ಕರಗಲಾರಂಭಿಸುತ್ತಾರೆ. ಕಡಲೇಕಾಯಿಯವ ದುಡಿದ ಚಿಲ್ಲರೆ ಎಣಿಸುತ್ತಾ ಮನೆಗೋಡುತ್ತಾನೆ, ಕೂಲಿಜನ ಬಸ್ಸೇರಿ ಊರುಸೇರುತ್ತಾರೆ, ಇಸ್ತ್ರಿ, ಹೊಟೇಲು, ಟೇಲರಿಕೆಯ ಮಂದಿ ಎಳು ಗಂಟೆಗಾಗಲೇ ಅಂಗಡಿ ಮುಚ್ಚುತ್ತಾರೆ, ಬಸ್ಸು ಕಾಯುವವರು ಸಿಕ್ಕ ಬಸ್ಸೇರಿ ಹೋಗುತ್ತಾರೆ, ಎಲ್ಲೋ ಒಂದೆರೆಡು ಗೂಡಂಗಡಿಗಳೊಳಗಿನಿಂದ ಮಾಸಿದ ಮುಖದ ಜನ ಇಣುಕುತ್ತಾರೆ. ಅಗೊಮ್ಮೆ ಈಗೊಮ್ಮೆ ಬರುವ
ಬಸ್ಸು ಜನರನ್ನಿಳಿಸುವುದಿಲ್ಲ, ಅದೊರಳಗಿನಿಂದ ಜನ ಹೊರಗಿಣುಕುವುದೂ ಇಲ್ಲ. ಹೀಗಾಗಿ ಎಲ್ಲಿ ಹೋದರು ಪಿತಿ ಪಿತಿ ಜನ ಎಂಬಂತಾಗುತ್ತದೆ. ಒಟ್ಟಿನಲ್ಲಿ ಗಲ್ಲಿಗಳಲ್ಲಿ ಸ್ಮಶಾನ ಮೌನ!, ಅರ್ಧ ಕೆಟ್ಟ ತೂಬಿನ ಲೈಟು ಆಗೊಮ್ಮೆ ಈಗೊಮ್ಮೆ ಮಿಣುಕಿ ಮಾಯವಾಗುತ್ತದೆ. ಜನರಿದ್ದಲ್ಲೀಗ ಕತ್ತಲು ಮತ್ತು ಒಂದೇ ಸಮನೆ ಎಂದಿಗೂ ಮುಗಿಯಲೊಲ್ಲದ ಮಳೆ, ಮಳೆ, ಮಳೆ.

ಮನೆ ಮಠವಿರದೆ ಬಸ್ಟ್ಯಾಂಡಿನ ಮೂಲೆಯೊಂದರಲ್ಲಿ ನಡುಗುತ್ತಾ ಕುಳಿತ ಮುದುಕಿಗೆ ಈ ಮಳೆ ಹಸಿವಿನೊಂದಿಗೆ ಸಣ್ಣ ಜ್ವರವನ್ನೂ ತಂದು ಕೊಡುತ್ತದೆ. ಆ ಛಳಿಯಲ್ಲಿ ಅದು ತಂದೊಡ್ಡುವ ಅನಾಥ ಭಾವದಲ್ಲಿ ಅವಳಲ್ಲಿದ್ದ ಒಂದು ತುಂಡು ಬ್ರೆಡ್ದು, ತುತ್ತನ್ನ ಸಿಕ್ಕೀತೆಂಬ ಅಸೆಯೂ ಸತ್ತುಹೋಗುತ್ತದೆ. ಅವಳಿಗೆ ಈ ಕತ್ತಲೆಂಬುದು , ಮಳೆಯೆಂಬುದು ತನ್ನ ಯೌವನದ ನೆನಪು ತರದೇ ಇಂತಹುದೇ ಕತ್ತಲೆಯ ರಾತ್ರಿ ಕಾಫಿಯ ಧಣಿಯೊಬ್ಬ ಅವಳಿಂದ ಕಸಿದುಕೊಂಡ ಅವಳ ಬದುಕು ಮತ್ತದರ ದುರಂತ ನೆನಪಾಗುತ್ತದೆ. ಇಂಥದೇ ಮಳೆಯಲ್ಲಿ ಸೇತುವೆ ದಾಟುವಾಗ ಕೊಚ್ಚಿಹೋದ ಮಗ ನೆನಪಾಗುತ್ತಾನೆ. ಮಳೆಯಿಂದ ಕೆಳಬಿದ್ದಿದ್ದ ಎಲೆಕ್ಟ್ರಿಕ್ ತಾರು ತಿಳಿದು ಕರಕಲಾಗಿ ಹೋದ ಗಂಡ ನೆನಪಾಗುತ್ತಾನೆ. ಅವನ್ಯಾವನೋ ಬೇರಿಯೊಂದಿಗೆ ಮುಂಬಯಿಗೆ ಕೆಲಸಕ್ಕೆಂದು ಓಡಿಹೋಗಿ ಅಲ್ಲೇ ಸೂಳೆಯಾಗಿರುವ ಮಗಳು, ಅದ್ಯಾವತ್ತೋ ಮಳೆಗೆ ಬಿದ್ದು ಹೋದ ಮನೆ ಮತ್ತದರೊಳಗೆ ಮಗಳು ಹಚ್ಚುತ್ತಿದ್ದ ದೀಪದ ಬೆಳಕು ನೆನಪಾಗಿ ಕಾಡುತ್ತದೆ. ಕೊನೆಗೆ ಛಳಿಯೆಂಬುದು ಅವಳ ಜೀವ ತೆಗೆದಿರುತ್ತದೆ. ರಾತ್ರಿ ಕಳೆದು ಹಗಲಾಗುವುದರೊಳಗೆ ಅವಳು ಅನಾಥ ಹೆಣವೆಂದು ನಮೂದಿಸಲ್ಪಡುತ್ತಾಳೆ.

ಜನವೆಲ್ಲ ಹೆಣ ನೋಡಿ ನಿಟ್ಟುಸಿರಾಗುತ್ತದೆ ಮತ್ತು ಮರೆತು ಮುಂದುವರೆಯುತ್ತದೆ. ಮತ್ತದೇ ಊರು. ಬೋಗಾದಿಯೆಂಬುದೊಂದು ಊರು, ಆ ಊರ ತುಂಬ ಜನ. ಜನ, ಜನ, ಜನ ಎಂದರೆ ಹಾಗಲ್ಲ ವಿಪರೀತ ಜನ. ಕಾಲ್ಕಲಿಗೇ ತೊಡರುವ ಮಿಜಿ ಮಿಜಿ ಜನ.

ಗಝಲು



ಹಿತವಾದ ಕಾಡುಗತ್ತಲು, ಕೊಂಚ ಮಳೆಹನಿ,
ಮತ್ತೊಂದಷ್ಟು ಸೋಡಿಯಂ ಲೈಟು
ನಿನಗಾಗಿ ನನ್ನದೊಂದು...... ಗಝಲು

ಮುನ್ನುಡಿ


ನನ್ನವೊಂದಿಷ್ಟು ಪುಟಗಳಿದ್ದವು, ನಿನ್ನವೊಂದಿಷ್ಟು ಪುಟಗಳು
ಹಾಗೂ ಹೀಗೂ ಕಥೆಯೊಂದಾಯ್ತು
ಇನ್ನು ಕೆಲವೇ ಪುಟಗಳಿವೆಯಷ್ಟೆ
ಕೊನೆ ಪುಟದಲ್ಲೊಂದು ಹೊಸ ಮುನ್ನುಡಿಯ ನಿರೀಕ್ಷೆಯಲ್ಲಿದ್ದೇನೆ

ಹಾಯ್ಕುಗಳ ಕೊಲೆ


ನಗು
ಒಮ್ಮೆ ಸುಮ್ಮನೆ ನಗು
ಹೂ ಅರಳದಿದ್ರೂ, ಒಂದು ಸ್ವಸ್ಥ ಬಿಸಿಲಂತೂ ಖಾತರಿ.

ಸೋಡಿಯಂ ಲೈಟು
ಹಿತವಾದ ಸಂಜೆಗತ್ತಲು, ಅಲ್ಲಲ್ಲೇ ಚೆಲ್ಲಿದ ಸೋಡಿಯಂ ಲೈಟು
ಲವ್ ಮೇಕಿಂಗ್ ಗೆ, ಈಡೆನ್ ಗಾರ್ಡನ್ ಬೇಕಿಲ್ಲ

ಗುಬ್ಬಿಮರಿ
ಮೊನ್ನೆ ದೊಡ್ಡ ಮಳೆಗೆ ಮಾಡು ಕುಸಿದುಬಿತ್ತು
ಹೊಸ್ತಿಲ ಮೇಲೆಲ್ಲ ಗುಬ್ಬಿಮರಿಗಳ ಛಿದ್ರ ದೇಹಗಳು

ನನ್ನಜ್ಜಿ
ನೀನು ದೊಡ್ಡಗಾತ್ರದ ಚಿಕ್ಕ ಮಗು
ನೆರೆತ ಮಂಡೆ, ಸುಕ್ಕು ಚರ್ಮ, ಗಟ್ಟಿ ನಗೆಯ ಸುಹಾಸಿನಿ

ಕನಸು
ಕನಸುಗಳಿಗೆ ಮಾತು ಬಂದು, ಸುಮ್ಮನೇ ಕೂಗಿಕೊಳ್ಳುತ್ತವೆ.
"ನೀನು ಬೇಕೂ" ಎಂದು

ಸಲಗ ಮತ್ತು ತುಲಸಿ


ಮುದ್ದು ಸಲಗ
ಎಳೆ ಬಿದಿರ ಮೆಳೆಗೆ ಹೇಳದೇ ನುಗ್ಗಿ,
ಧ್ವಂಸಮಾಡಿದೆಯಲ್ಲಾ ನನ್ನ ಸಲಗವೇ
ಎದುರಿಗೇ ನಿಂತ ಮುಂಗಾರು,
ಮತ್ತೆ ನನ್ನ ಚಿಗುರಿಸೀತೆಂಬುದೊಂದೇ ನೆಚ್ಚಿಗೆ.

ತುಲಸಿ
ಶ್ರೀ ತುಲಸಿಯೇಕೋ ನಾಚಿ ಕೆಂಪಗಾಗಿದ್ದಳು ಮುಂಜಾನೆ
ನೋಡಿದೆಯಾ ಅವಳಿನಿಯನ ನೆನಪಿಗಿರುವ ಶಕ್ತಿ?
ಮುದಿ ಮುದುಕಿಯಲ್ಲೂ ಮೈನೆರೆದ ಸಂಭ್ರಮ

ರಾವಣ



ಸೀತೆ ಕದ್ದಿದ್ದು ನಿಜ, ಆದರೆ ಅವಳನ್ನು ಚೆನ್ನಾಗಿಟ್ಟೆ
ಕೈಹಿಡಿದ ರಾಮನಂತೆ ಬೆಂಕಿ ಪಾಲು ಮಾಡಲಿಲ್ಲ.
ಸೋತು ಸತ್ತದ್ದು ನಿಜ. ಪಡೆದದ್ದು ವೀರ ಮರಣ
ಕ್ಷತ್ರಿಯ ರಾಮನಂತೆ ನೀರುಪಾಲಾಗಲಿಲ್ಲ
ಗಂಡನ ಸಂಶಯಕ್ಕೆ, ಪಾವಿತ್ರ್ಯದ ಹೆಸರೇಕೋ?
ಆತ್ಮಹತ್ಯೆಗೇಕೆ ದೈವಿಕತೆಯ ಸೋಗು?.

ರಾವಣ
ನೂರು ತಲೆ ನನ್ನವು
ನನ್ನವು ಸಾವಿರ ಹೆಸರುಗಳು
ನಾನು ಬೆಂಕಿಯುಸಿರ ರಾಕ್ಷಸ
ರಕ್ತದಾಹೀ ನನ್ನ ಚಕ್ಷುಗಳು
ನೂರು ತಲೆಯ ಭಾರ ನಿಮಗೇನು ಗೊತ್ತು?
ಸಹಸ್ರ ಹೆಸರುಗಳು ನೆನಪಿನಲ್ಲುಳಿಯವು
ಉಸಿರು ತುಂಬಿದ ಎದೆಗೂಡು ದಹಿಸುತ್ತಿದೆ
ಎಲ್ಲೆಲ್ಲೂ ರಕ್ತ ನೋಡಿ ವಾಕರಿಕೆ.

ನಾನು + ಅಮ್ಮ + ಅಹಂಕಾರ



ನಾನು ನಿನ್ನ ಬದುಕಿನ ಮೂರನೆ ಗಂಡಸು
ಅಜ್ಜನಿಗೆ ಮಗಳು, ಅಪ್ಪನಿಗೆ ಹೆಂಡತಿ
ಹಾಗಾಗಿ ನನಗೆ ಅಮ್ಮ
ನೀನು ನನ್ನ ಬದುಕಿನ ಮೊದಲನೇ ಹೆಂಗಸು
ಅಜ್ಜನಿಗೆ ಮಗಳು, ಅಪ್ಪನಿಗೆ ಹೆಂಡತಿ
ಏಕೆಂದರೆ ನೀನನಗೆ ಅಮ್ಮ*

* ನನಗೆ ಅಮ್ಮನಾಗದಿದ್ದರೆ, ಅಜ್ಜನಿಗೆ ಮಗಳು, ಅಪ್ಪನಿಗೆ ಹೆಂಡತಿಯಾಗುತ್ತಿರಲಿಲ್ಲ ನೀನು.!!

ಕನಸು ಆಸೆ ಮತ್ತು ನಿರೀಕ್ಷೆ


ನನ್ನದೊಂದು ಕನಸಿದೆ
 ಹಳೆ ಕನಸುಗಳೆಲ್ಲ ಕೈಗೂಡಿಯೋ
ಛಿದ್ರವಾಗಿಯೋ, ಮುಗಿದುಹೋಗುವುದರೊಳಗೆ,
ಹೊಸ ಕನಸುಗಳಿಗೆ ಬಸಿರಾಗಿ, ಹೊಸ ನಿರೀಕ್ಷೆಗಳಿಗೆ
ತೆರೆದುಕೊಳ್ಳಬೇಕೆಂದು
ನನ್ನದೊಂದು ಆಸೆಯಿದೆ
ಚಿಗುರಿನಾಸೆಯ ಬಿಟ್ಟು, ಬೇರ ಮೋಹವ ಸುಟ್ಟು
ಸತ್ತು ಮಲಗಿರುವ ಒಣ ಕೊರಡು ಗಳೆಲ್ಲವುಗಳಲಿ
ಹಸುರಿನಾಸೆಯ, ಬದುಕ ಪ್ರೀತಿಯ
ಚಿಗುರಿಸಬೇಕೆಂದು
ನಗೊಂದು ನಿರೀಕ್ಷೆ
ಕರಿ ಮೋಡದೊಡಲಿಂದ
ಭೋರ್ಗರೆವ ಮಳೆ ಸುರಿದು, ಹೊಸ ನೀರು ಹೊಸ ಗಾಳಿ
ಹೊಸ ಕಿರಣ ಗಳೊಡಗೂಡಿ, ಕವಿದ ಗೊಳೆ ಗೊಡ್ದನ್ನು
ತೊಳೆದು ಹಾಕುವುದೆಂದು.

ಆಕಾಶಬುಟ್ಟಿ



ನನ್ನದೊಂದು ಆಕಾಶಬುಟ್ಟಿ
ಅದರಲ್ಲಿಯ ಮಿಣುಕು ಬೆಳಕೆಲ್ಲ ನಿನ್ನದೆ

ಇನ್ನೇನು ಮುಗಿಲಿಗೇರುವಷ್ಟರಲ್ಲಿ,
ನೀ ಹೊರಟುಹೊದೆ ಕತ್ತಲಾಗಿಸಿ

ಮೇಲೆ ಹಾರಲಾರದೆ, ಕೆಳ ಬೀಳಲಾರದೆ
ಕಷ್ಟದಿ ತೊಳಲುತ್ತಿರುವೆ ನಾನು

ನನ್ನೀ ಒದ್ದಾಟಕ್ಕೆ,
ನಿನ್ನ ಮೌನವೆಂದಿಗೂ ಉತ್ತರವಾಗಲಾರದು

ಹೋಗುವ ಮುನ್ನ.
ಸುಟ್ಟುಬಿಡಲಿಲ್ಲವೇಕೆ? ಬೆಳಕೇ?

ಹಳೆ ಪುಸ್ತಕದ ಪುಟಗಳಿಂದ


ಲಾಜಿಕ್
"ಅದೇನೇ ಲಾಜಿಕ್ ನ್ ಬಗ್ಗೆ ಮಾತಾಡು, ಅದೇನೇ ಪ್ರಾಕ್ಟಿಕಲ್ ಆಗಿರು. ಆದರೆ ನಿನ್ನ ಅಂಥಾ ವಿಪರೀತ ಬೋರಿಂಗ್ ಫಿಲಾಸಫಿಗಳೆಲ್ಲವನ್ನೂ ಮೀರಿದ ಸತ್ಯ ಗೊತ್ತಾ?.... " ನನ್ನ ಪ್ರೀತಿಸ್ತಿದ್ದೀ ನೀನು"!.. ಅದೊಂದು ಸಾಕು ನಿನ್ನೆಲ್ಲ ರಿಯಲಿಸಮ್ ನ್ ತಿಂದು ಹಾಕೋಕೆ. ಯಾಕೇಂದ್ರೆ ನಿನ್ನಂಥಾ Pragmatic realist ನನ್ನ್ಂಥಾ Emotional optimist ನ  ಪ್ರೀತಿಸ್ತಿದ್ದೀ ಅಂದ್ರೆ, ನಿನಗೂ ಒಂದಷ್ಟು ಹುಚ್ಚುತನ, ಪಾಗಲ್ ಪನ್ ಇಷ್ಟ ಅಂತ ಅರ್ಥ"

ಒಂದು ಕನಸು ಹೇಳಬೇಕು ನಿನಗೆ
ನಾವಿಬ್ಬರೇ ಇಬ್ಬರು.. ಹಾಸಿ ಹೊದೆಯುವಷ್ಟು ಬೆಳದಿಂಗಳು.. ಸಿಕ್ಕಷ್ಟೂ ದೊರೆಯುವ ಕತ್ತಲ ಮೌನ.. ಭೋರ್ಗರೆಯುವ ಕಡಲಾಳ.. ವರ್ಷಗಳಿಂದ ಉಪ್ಪು ನೀರಿಗೆ ತೋಯ್ದು ಒದ್ದೆಯಾಗಿರುವ ಬೆಚ್ಚಗಿನ ರೇವೆಯಮೇಲೆ ನೆಮ್ಮದಿಯಾಗಿ ನಡೆಯೋಣ..ನಾವು ಇಟ್ಟ ಹೆಜ್ಜೆಗಳ ಗುರುತು ಮರಳ ಮೇಲೆ.. ನಾವಾಡಿಕೊಂಡ ಮತುಗಳು ಬರೀ ನಮ್ಮವು.. ನಮ್ಮ ನಗುವಿನ ಮೇಲೆ ನಮ್ಮದೇ ಆಳ್ವಿಕೆ.
ಹಾಗೆ ನಡೆದು ಹೋದವರು, ಮರದ ಮೇಲೆ ನಿಂತಿರುವ ನಮ್ಮ Love nest ಗೆ ಹೋಗೋಣ.. ಅದು ನಮ್ಮ ಮನೆ.. ನಮ್ಮಿಬರಿಗೆ ಮೀಸಲು.. ಮನೆಯ ಬಿಸುಪು. ಕದವಿಕ್ಕಿಕೊಂಡರೆ ನಮ್ಮ ಕನಸಿನ ಲೋಕ ಕಣ್ದೆರೆಯಬೇಕು. ನಮ್ಮದು ಒಂದು ದೀರ್ಘ ಪ್ರೀತಿಯ ನಿದ್ರಾಲೋಕ.ಕನಸು ಕನವರಿಕೆಗಳನ್ನು ಹಂಚಿಕೊಳ್ಳೋಣ.... ಬೆಳಕ ರಾತ್ರಿಗೆ ಹಗಲು ಬಾರದು.. ನಮ್ಮ ಕನಸು ನಿರಂತರ.

ನೀನು ಉದ್ದುದ್ದ ಶುದ್ಧ ನೀರು
ಮೊದಲ ಪ್ರೀತಿಗೆ ಒಡ್ಡಿಕೊಂಡ ಹೃದಯಗಳಿಗೆ ಆಸೆಗಳ ಚಿಗುರೊಡೆಸುವ ಮೊದಲ ಮಳೆ. ಬರದ ಭೀಕರ ಬಿಸಿಲಿಗೆ ಬರಡಾಗಿಬೆಂದಿರುವ ಧರಣಿಗೆ ಬದಕ ನೀಡುವ ಉತ್ತರಿ ಮಳೆ. ಮಲೆನಾಡಿನ ಮಳೆಗಿರುವ ಭೋರ್ಗರೆತ ನೀನು. ಅಗಸ್ಟ್ ನಿಂದ ಡಿಸೆಂಬರ್ ವರೆಗೆ ಬಿಡದೇ ಸುರಿದು ಉಸ್ಸೆನ್ನಿಸುವ ಮೂಡಿಗೆರೆಯ ಸೋನೆ ಮಳೆ.
ಧೋ ಸುರಿವ ಕುಂಭದ್ರೋಣ ನೀನು. ನಿನ್ನ ಸುರಿತಕ್ಕೆ ತಲೆಯೊಡ್ಡಿ ನಿಲ್ಲಬೇಕು, ನಿನ್ನ ಸೆಳವಿಗೆ, ಭೋರ್ಗರೆವ್ ಜೋರಿಗೆ ನನ್ನ ಅಸ್ತಿತ್ವವನ್ನೆಲ್ಲ ಧಾರೆಯೆರೆಯುವ ಹಂಬಲ. ನೆನೆದು ದಣಿದವನಿಗೆ ಸಾಂತ್ವನ ನೀಡುವ ತುಂತುರಾಗಿ ಮತ್ತೆ ನಿನ್ನ ಉದ್ಭವ.
ನೀನು ಜೀವನ್ಮುಖಿ
ನಾನು ನಿನ್ನ ವಿರಹಿ. ನಿನ್ನ ಬದುಕ ಪ್ರೀತಿಗೆ ಬೆರಗಾದವನು.. ನಿನ್ನ ಕಣ್ಣ ಹೊಳಪಿಗೆ ನನ್ನ ಕಣ್ಣ ನೀರವತೆಯೆಲ್ಲ ಸರ್ವನಾಶ!...ನಿನ್ನ ಜೀವನ ಪ್ರೆಮಕ್ಕೆ ನಾನು ಬಂಧಿ. ನಿನ್ನ ಕನಸುಗಲಿಗೆಲ್ಲ ಮೊದಲ ಕೇಳುಗ, ನಿನ್ನ ಕಣ್ಣೀರಿಗೆ ಮೊದಲ ಹೆಗಲು.. ನಿನ್ನ ಪ್ರೀತಿಯೆಲ್ಲ ನನಗೆ,.. ಸ್ವಾರ್ಥಿ ನಾನು.. ನನ್ನ ಏಕಾಂತಕ್ಕೆ ಅರ್ಥವಿಲ್ಲ, ನೀನಿಲ್ಲದೆ.. ನಿನ್ನ ಹಣೆಯ ನೆರಿಗೆಗೆ ಸಾವಿರ ಮುತ್ತುಗಳು.

ಶುದ್ಧ ಬ್ರಹ್ಮ ಪ್ರಾತ್ಪರ ರಾಮ
ಹಬ್ಬದ ಸಂಭ್ರಮ ನಿನ್ನ ಸನಿಹ. ನಿನ್ನ ಭೇಟಿಯಾಗೋದು ಕೆಲವೇ ಕ್ಷಣಗಳಿರಬಹುದು, ಆದರೆ ನನಗದು ಯುಗಾದಿಯ ಸಂಜೆಯಂತೆ, ನಿನ್ನ ಮನಸಿನ ಭೂಮಿಯ ಮೀಲೆ ನನ್ನ ಪ್ರೀತಿಯ ಪೈರ ಕಂಡಾಗ ನನ್ನ ಎದೆ ತುಂಬ ಸಂಕ್ರಾಂತಿಯ ಸೂರ್ಯೋದಯ, ನನ್ನ ಮಾತುಗಳಿಗೆ ನೀನು ನಕ್ಕರೆ, ಅದು ರಾಮ ನವಮಿಯ ಪಾನಕದ ಸಿಹಿ. ನಿನ್ನೊಂದಿಗಿನ ಕ್ಷಣ್ಗಳೆಷ್ಟು ಖಾಸಗಿ!.. ಅದೆಷ್ಟು ಶುದ್ಧ! ನಿಜವಾಗಿಯೂ ನೀನೆಂದರೆ ಸಂಜೆ ಏಳರ ವೇಳೆಗೆ ಅಮ್ಮ ಹಚ್ಚಿಡುವ ತುಪ್ಪದ ದೀಪ.
ಹಬ್ಬಗಳಿಗೆ ಮನಸ್ಸಿನ್ ಮೈಲಿಗೆಯನ್ನು ತೊಳೆಯುವ ಶಕ್ತಿಯಿದೆಯಂತೆ!, ನಿನ್ನ ಪ್ರೀತಿಗೆ, ನನ್ನ ಮನಸಿನ ನೋವ ಕಳೆಯುವ ತಾಕತ್ತು
ನಮ್ಮ ಪ್ರೀತಿಯ ಕ್ಷಣಗಳಲ್ಲಿ, ಬಯಕೆಯ ದೀಪಾವಳಿ.. ನಿನ್ನ ತೆಕ್ಕೆ ಸೇರಿ, ನಮ್ಮಿಬ್ಬರ ಉಸಿರೊಂದಾಗುವ ಹೊತ್ತಿಗೆ, ಸುಖದ ವಿಜಯದಶಮಿ.. ಮನಸ ಕದ್ದ ಚೌತಿ ಚಂದ್ರನೇ, ನಿನ್ನ ಮುದ್ದು ನಗುವಿನಲ್ಲಿ,... ರಾಮಸ್ಯ ಪ್ರಿಯದರ್ಶನಂ...

ನೀನು ಕನಸು..
ನಾನು ನಿನಗೊಂದು ಹೆಸರಿಟ್ಟಿದ್ದೀನೆ. ಕನಸು. ಕನಸೆಂದಿಗೂ ಕನಸಾಗಿದ್ದರೆ ಅದನ್ನ ನನಸಾಗಿಸಲು ನಮ್ಮ ತುಡಿತ, ತುದಿತದಲ್ಲೇ ಸೊಂತೋಷ ಸಾರ್ಥಕ್ಯ,.. ಕನಸು ಹತ್ತಿರಾಗುತ್ತಿದ್ದಂತೆ, ಇನ್ನೇನು ನನಸಾಗಿಯೇ ಹೋಯ್ತೆಂಬ ರೋಮಾಂಚನ!..ಬೇರೆ ಹೇಗೂ ನಿನ್ನ ಬಗ್ಗೆ ನನ್ನ ಭಾವನೆ ಗಳನ್ನು ಹೇಳಿಕೊಳ್ಳಲಾರೆ.
ಎಷ್ಟು ನಿಜ!.. ಬದುಕಿಗೊಂದು ಕನಸಿರಬೇಕು...ಅದೂ.. ಸುಮ್ಮನೆ ನನಸಾಗಿ ಬಿಡುವ ಕನಸಲ್ಲ.. ಹಾಗೆ ಸುಲಭಕ್ಕೆ ನನಸಾಗಿ ಹೋದರೆ ಬದುಕಿಗಿನ್ನೆಲ್ಲಿಯ ಸೊಗಸು?.. ಕನಸಿಗಾಗಿಯೇ ನಾವು ಪ್ರತಿ ಹಗಲು ನಿದ್ದೆ ಬಿಟ್ಟೇಳಬೇಕು..ರಾತ್ರಿ ಮತ್ತದೇ ಕನಸಿಗೆ ಶರಣು. ಹಗಲ್ಲೆಲ್ಲ ಕನಸಿನ ಹಿಂದೆ ಓಟ. ಒಮ್ಮೆ ನನಸಾಯಿತೋ.. ಅದು ಮುಕ್ತಾಯವಲ್ಲ.. ಕನಸು ಮತ್ತಷ್ಟು ವಿಸ್ತಾರ ವಾಗಬೇಕು. ಕನಸಿನೊಂದಿಗೆ, ಕನಸಿದವನೂ ಬೆಳೆದು ಮಾಗಬೇಕು.. ಬದುಕು ಪೂರ್ಣ..

ಮಾತನಾಡ ಬೇಡ ನೀನು
ಬೇಡ ಮಾತುಗಳು ನಮಗೆ ಇನ್ನು. ಅವೆಷ್ಟೋ ವರ್ಷಗಳು ವಟ ವಟ ಮಾತುಗಳಲ್ಲಿ ಕಳೆದು ಹೋಗಿವೆ. ನಿನ್ನ ಚಟ ಪಟ ಮಾತುಗಳನ್ನು ಕೇಳಿ ನನ್ನಲ್ಲಿನ ಕೇಳುಗ ರೋಸಿ ಹೋಗಿದ್ದಾನೆ!.. ಸಾಕು ಇನ್ನು.. ದಯವಿಟ್ಟು ಸಾಕು..
ಇನ್ನುಳಿದಷ್ತು ಕಾಲ ಮೌನ ವಾಗಿದ್ದು ಬಿಡೋಣ ನಾವು..ವಟಗುಟ್ಟಿ ನಮ್ಮ ಸಂಬಂಧದ ಗಂಟಲು ಹಿಸುಕಿದ್ದು ಸಾಕು..ಒಂದಷ್ಟು ಸಮಯ, ಮಾತುಗಳ ಹಂಗಿಲ್ಲ್ದ ಬದುಕಿಬಿಡೋಣ.. ನಿನ್ನ ಪಾಡಿಗೆ ನೀನಿರು.. ನನ್ನ ಪಾಡು ನನಗಿರಲಿ.
ನನಗೆ ಹುಚ್ಚೆನ್ನುತ್ತೀಯಾ?. ಹೌದು.. ನನಗೆ ನಿನ್ನ ಹುಚ್ಚು... i am mad about you!!..ದಿನವೂ ನೀನು ಹೊಸತಾಗಿ ನನಗೆ ಬೇಕು.. ಅದಕ್ಕೇ ಹೇಳಿದ್ದು.. ಮಾತು ಸತ್ತ ನಂತರವೂ ನೀ ನನಗೆ ಹೊಸತಾಗಿ ಕಾಣಬೇಕೆಂದರೆ.. ನಿಲ್ಲಿಸು ಮಾತುಗಳನ್ನ.